'ಬಿಗ್ ಬಾಸ್' ಎಂಬ ರಿಯಾಲಿಟಿ ಶೋ ಗೆಲ್ಲುವ ಉದ್ದೇಶದಿಂದ ಕೆಲ ಸಂಪ್ರದಾಯಗಳನ್ನು ಧಿಕ್ಕರಿಸಿದ, ಚಾಲಾಕಿತನಕ್ಕಿಂತ ಒಳ್ಳೆಯತನದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದ, ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.
14 ವಾರಗಳ ನಂತರ ಅಂತಿಮ ಹಂತದಲ್ಲಿ ಉಳಿದಿದ್ದ ಏಳು ಜನ ನೇರವಾಗಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಕಳೆದ ವಾರ 'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಅವರು ಹೊರಬಿದ್ದಿದ್ದರೆ, 15ನೇ ವಾರದ ಆರಂಭದಲ್ಲಿಯೇ ಸಮೀರ್ ಆಚಾರ್ಯ ಅವರು ಸೂಟ್ ಕೇಸ್ ಹಿಡಿದು ಹೊರನಡೆದಿದ್ದಾರೆ.
ಸಮೀರ್ ಆಚಾರ್ಯ ಅವರಿಂತ ಹೆಚ್ಚು ಮತ ಪಡೆದಿರುವ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ಅಂತಿಮ ಸುತ್ತು (ಟಾಪ್ 5) ಪ್ರವೇಶಿಸಿದ್ದಾರೆ. ಇಷ್ಟು ದಿನ ಸ್ಪರ್ಧಿಗಳನ್ನು ಉಳಿಸಲು ಜನರು ಮತ ಹಾಕುತ್ತಿದ್ದರೆ, ಇನ್ನು ಗೆಲ್ಲಿಸಲು ಮತ ಹಾಕಬೇಕಿದೆ.
Big Boss Kannada season5 is in its final stage and Sameer Aacharya gets evicted this week making way to top 5